ಸರ್ಕಾರಿ ಆದೇಶ: ಇಂದು ಸರಕಾರ ಬಡ ವರ್ಗದ ಜನರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಲೆ ಇದೆ,ಅದರಲ್ಲೂ ಹಿರಿಯ ನಾಗರಿಕರಿಗೆ, ವಿಧವೆಯರಿಗೆ, ಅಂಗವಿಕಲ ಹೀಗೆ ಹಲವು ರೀತಿಯ ಸೌಲಭ್ಯ ವನ್ನು ವಿತರಣೆ ಮಾಡ್ತಾ ಇದ್ದು , ಇದೀಗ ಪಿಂಚಣಿ ದಾರರಿಗೆ ಮಹತ್ವ ಸುದ್ದಿಯೊಂದನ್ನು ನೀಡಲು ಮುಂದಾಗಿದೆ, ಹೌದು ಇಂದು ಎಲ್ಲ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ (Aadhaar Card) ಬಹಳ ಮುಖ್ಯ ಎನಿಸಿದೆ, ಇದೀಗ ಪಿಂಚಣಿ (Pension) ಪಡೆಯುವವರು ಈಕೆಲಸ ತಪ್ಪದೆ ನೀವು ಮಾಡಬೇಕಿದೆ.
ಆಧಾರ್ ಕಾರ್ಡ್ ಕಡ್ಡಾಯ:
ಇಂದು ಸರಕಾರದ ಪ್ರತಿಯೊಂದು ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ (Aadhaar Card) ಕಡ್ಡಾಯ ವಾಗಿದ್ದು, ಅದೆ ರೀತಿ ನೀವು ಆದಾರ್ ಕಾರ್ಡ್ ಗೆ ನೀವು ನಿಮ್ಮ ಬ್ಯಾಂಕ್ ಪಾಸ್ ಪುಸ್ತಕ (Bank Pass Book) ಲಿಂಕ್ ಮಾಡುವುದು ಕೂಡ ಕಡ್ಡಾಯ ವಾಗಿದೆ.
ಹಣ ಬರಲ್ಲ:
ಪ್ರತಿಯೊಂದು ಹಣಕಾಸಿನ ಸೌಲಭ್ಯ ಪಡೆಯಲು ಪ್ಯಾನ್ (PAN Card) ಮತ್ತು ಆಧಾರ್ ಕಾರ್ಡ್ (Aadhaar Card) ಅಗತ್ಯವಿದ್ದು . ಇಂದಿನ ಕಾಲದಲ್ಲಿ PAN ಕಾರ್ಡ್ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಅದರಲ್ಲೂ ನಿಮ್ಮ ಆಧಾರ್ ಗೆ ಪ್ಯಾನ್ ಕಾರ್ಡ್ ಲಿಂಕ್ (PAN Aadhaar Link) ಮಾಡುವುದು ಕಡ್ಡಾಯ ವಾಗಿದೆ, ಬ್ಯಾಂಕ್ ಪಾಸ್ ಪುಸ್ತಕ ಕೂಡ ಲಿಂಕ್ ಮಾಡಬೇಕಿದೆ, ಇಲ್ಲ ದಿದ್ದಲ್ಲಿ ನಿಮಗೆ ಪಿಂಚಣಿ ಹಣ ದೊರೆಯುದಿಲ್ಲ.
ಪಿಂಚಣಿ ಮೊತ್ತ ಹೆಚ್ಚಾಗಲಿದೆಯಾ?
ಇದೀಗ ಕೇಂದ್ರ ಸರ್ಕಾರ ಪಿಂಚಣಿ ಯೋಜನೆಯನ್ನು ಮತ್ತಷ್ಟು ಬಲಪಡಿಸಲು ಪ್ಲಾನ್ ಮಾಡಿಕೊಂಡಿದೆ, ಈ ಪಿಂಚಣಿ ಯೋಜನೆ (Pension Yojana) ಮೂಲಕ ಬಡ ವರ್ಗದ ಮಹಿಳೆಯರು, ಹಿರಿಯರು,ಅಂಗವಿಕಲರು ಪ್ರಯೋಜನ ಪಡೆಯುತ್ತಿದ್ದಾರೆ. ಈ ಯೋಜನೆಯಡಿ ಸರ್ಕಾರವು ಬಹಳಷ್ಟು ಪ್ರೊತ್ಸಾಹ ನೀಡ್ತಾ ಇದ್ದು, ಮಹಿಳೆಯರಿಗೆ ಪ್ರತಿ ತಿಂಗಳು ಪ್ರಯೋಜನವನ್ನು ನೀಡ್ತಾ ಇದೆ,ಇದೀಗ ಪಿಂಚಣಿ (Pension) ಹಣದ ಮೊತ್ತ ಏರಿಕೆಯಾಗಲಿದೆ ಎನ್ನಲಾಗಿದೆ.
ಮನವಿ ಮಾಡಲಾಗಿದೆ:
ಈಗಾಗಲೇ ಹಿರಿಯರ ವೃದ್ಯಾಪ ವೇತನ ಹೆಚ್ಚು ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮನವಿ ಕೂಡ ಮಾಡಿದ್ದಾರೆ, ಈಗಾಗಲೇ ಸಿದ್ದರಾಮಯ್ಯ (Siddaramaiah) ಮುಂದಿನ ಬಜೆಟ್ ನಲ್ಲಿ ಮೊತ್ತ ಹೆಚ್ಚಿಸುವುದಾಗಿ ಭರವಸೆ ಯನ್ನು ಕೂಡ ನೀಡಿದ್ದಾರೆ.